ಕಾರ್ಮಿಕ ಕಲ್ಯಾಣ ಕ್ರಮಗಳು

ನೌಕರರ ಅನುಕೂಲಕ್ಕಾಗಿ ಕ.ರಾ.ರ.ಸಾ.ನಿ.ವು ಹಲವಾರು ಕಾರ್ಮಿಕ ಕಲ್ಯಾಣ ಕ್ರಮಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕೆಲವು ಪ್ರಮುಖ ಕಲ್ಯಾಣ ಯೋಜನೆಗಳನ್ನು ಕೆಳಗೆ ವಿವರಿಸಲಾಗಿದೆ:

 • ದುಶ್ಚಟ- ನಿವಾರಣಾ ಕೇಂದ್ರ:

  1997 ರಿಂದ ಕ.ರಾ.ರ.ಸಾ.ನಿ. ವು WAPPA(ಕಾರ್ಯಸ್ಥಾನ ಮದ್ಯ ನಿರೋಧ ಕಾರ್ಯಕ್ರಮ ಮತ್ತು ಚಟುವಟಿಕೆ ) ಎಂಬ ದುಶ್ಚಟ-ನಿವಾರಣಾ ಕಾರ್ಯಕ್ರಮವೊಂದನ್ನು, ಉದ್ಯೋಗಿ ಬಾಂಧವ್ಯ ಕಾರ್ಯಕ್ರಮವಾಗಿ ಜಾರಿಗೆ ತಂದಿದೆ. ಈ ಕಾರ್ಯನೀತಿಯ ಧ್ಯೇಯೋದ್ದೇಶಗಳು:
  • ಕಾರ್ಮಿಕ ಆರೋಗ್ಯ ಮತ್ತು ಕಲ್ಯಾಣ ಹಾಗೂ ಕಾರ್ಯಕಾರಿ ಮತ್ತು ಪರಿಸರ ಸುರಕ್ಷತೆಯೆಡೆಗೆ ನಿಗಮದ ಬದ್ಧತೆಯ ಅಂಗವಾಗಿ, ಉದ್ಯೋಗಿಗಳಲ್ಲಿ ಮದ್ಯ ದುರ್ಬಳಕೆಗೆ ಪ್ರತಿಬಂಧ ಹೇರುವುದು.
  • ವಿಶೇಷವಾಗಿ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ, ನೌಕರರಿಗೆ ಮದ್ಯಸೇವನೆಯ ಅಪಾಯ ಹಾಗೂ ಪರಿಣಾಮಗಳ ಬಗ್ಗೆ ಶಿಕ್ಷಣ ಒದಗಿಸುವುದು ಹಾಗೂ ಈ ದುಶ್ಚಟವನ್ನು ತ್ಯಜಿಸಲು ಎಲ್ಲಾ ನೌಕರರಿಗೆ ಅಗತ್ಯ ನೆರವನ್ನು ಒದಗಿಸುವುದು.
 • ಬೆಂಗಳೂರು ಹಾಗೂ ಮೈಸೂರಿನಲ್ಲಿ ರೋಗ ನಿರೋಧಕ ಔಷಧ ಮತ್ತು ಆರೋಗ್ಯಕರ ಜೀವನಶೈಲಿ ಚಿಕಿತ್ಸಾಲಯಗಳ ಸ್ಥಾಪನೆ

  ಈ ಚಿಕಿತ್ಸಾಲಯಗಳು ಎಲ್ಲ ನೌಕರರಿಗೆ ಸಂಪೂರ್ಣ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿವೆ.
 • ವಿಮಾ ಯೋಜನೆ

  ಉದ್ಯೋಗಿ ಹಾಗೂ ಸಂಸ್ಥೆ ಇಬ್ಬರ ವಂತಿಗೆಯೊಂದಿಗೆ, ಕ.ರಾ.ರ.ಸಾ.ನಿ. ನೌಕರರ ಕುಟುಂಬ ಕಲ್ಯಾಣ ಯೋಜನೆಯೆಂಬ ಆಂತರಿಕ ವಿಮಾ ಯೋಜನೆಯೊಂದು ಅಸ್ತಿತ್ವದಲ್ಲಿದೆ. ಈ ಯೋಜನೆ, ಸೇವೆಯಲ್ಲಿರುವಾಗ ಸಾವಪ್ಪುವ ಉದ್ಯೋಗಿಗಳ ಅವಲಂಬಿತರಿಗೆ ರೂ. 3 ಲಕ್ಷ ದ ಪರಿಹಾರಧನವನ್ನು ಒದಗಿಸುತ್ತದೆ.
 • ಯೋಗ್ಯತಾ ಪ್ರಶಸ್ತಿ

  ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಸಂಸ್ಥೆಯ ಉದ್ಯೋಗಿ/ಅಧಿಕಾರಿಗಳ ಮಕ್ಕಳಿಗೆ ಯೋಗ್ಯತಾ ಪ್ರಶಸ್ತಿ ಪುರಸ್ಕಾರ.
 • ಶಿಕ್ಷಣ ಸಾಲ

  ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಉದ್ಯೋಗಿಗಳ ಮಕ್ಕಳಿಗೆ, ಬೋಧನಾ-ಶುಲ್ಕದ ಭತ್ಯೆಗಾಗಿ ರೂ. 1 ಲಕ್ಷದ ವರೆಗಿನ ಸಾಲಯೋಜನೆ.
 • ವೈದ್ಯಕೀಯ ಖರ್ಚು ಮರುಪಾವತಿ

  ರಾಜ್ಯ ಸರ್ಕಾರದ ಸಮಾನವಾಗಿ ವೈದ್ಯಕೀಯ ಖರ್ಚು ಮರುಪಾವತಿ ಸೌಲಭ್ಯ. ಉದ್ಯೋಗಿ ಹಾಗೂ ಅವಲಂಬಿತರ ಗಂಭೀರ ವ್ಯಾಧಿ ಮತ್ತು ವೈಯಕ್ತಿಕ ಕಾಯಿಲೆಗಳಿಗಾಗಿ ಮುಂಗಡ ಹಣ ಪಾವತಿ.
 • ಅಂಗೀಕೃತ ಆಸ್ಪತ್ರೆಗಳು

  ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ 108 ಕ್ಕಿಂತ ಹೆಚ್ಚು ಪ್ರಸಿದ್ಧ ಖಾಸಗಿ ಆಸ್ಪತ್ರೆಗಳು ಹಾಗೂ 7 ವ್ಯಾಧಿ ನಿರ್ಣಾಯಕ ಕೇಂದ್ರಗಳಿಗೆ ಕ.ರಾ.ರ.ಸಾ.ನಿ. ವು ಮಾನ್ಯತೆ ಒದಗಿಸಿದೆ.
 • ಶೈಕ್ಷಣಿಕ ಸಹಾಯ

  ವಿವಿಧ ಶೈಕ್ಷಣಿಕ ತರಗತಿಗಳಲ್ಲಿ ಅಭ್ಯಸಿಸುತ್ತಿರುವ ಉದ್ಯೋಗಿಗಳ/ಅಧಿಕಾರಿಗಳ ಮಕ್ಕಳಿಗೆ ಪ್ರತಿ ತಿಂಗಳು ಪ್ರತಿಭಾವೇತನ ಒದಗಿಸುವ ಯೋಜನೆ.
 • ಪ್ರಶಸ್ತಿ ಯೋಜನೆಗಳು

  ನಿಗಮದ ಅಪಘಾತ ರಹಿತ ಚಾಲಕರಿಗೆ ಸ್ವರ್ಣ ಹಾಗೂ ರಜತ ಪ್ರಶಸ್ತಿ ಪ್ರದಾನ.
  • ಸ್ವರ್ಣ ಪದಕ : ಗ್ರಾಮಾಂತರ ವಿಭಾಗಗಳಲ್ಲಿ 15 ವರ್ಷ ಹಾಗೂ ನಗರ ಪ್ರದೇಶಗಳಲ್ಲಿ 7 ವರ್ಷ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿದ ಚಾಲಕರಿಗೆ ಈ ಪ್ರಶಸ್ತಿ ಪ್ರದಾನ.
  • ರಜತ ಪದಕ : ಗ್ರಾಮಾಂತರ ವಿಭಾಗಗಳಲ್ಲಿ 5 ವರ್ಷ ಹಾಗೂ ನಗರ ಪ್ರದೇಶಗಳಲ್ಲಿ 3 ವರ್ಷ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿದ ಚಾಲಕರಿಗೆ ಈ ಪ್ರಶಸ್ತಿ ಪ್ರದಾನ.
  ಶೌರ್ಯ ಪ್ರಶಸ್ತಿ ಪದಕ ಯೋಜನೆ:
  • ನಂ. 9129, ದಿ. 25.11.09 ರ ನಿರ್ದೇಶಕ ಮಂಡಳಿಯ ನಿರ್ಣಯದಂತೆ ಶೌರ್ಯ ಪ್ರಶಸ್ತಿ ಪದಕ ಯೋಜನೆಯನ್ನು ನಿಗಮದಲ್ಲಿ ಪರಿಚಯಿಸಲಾಗಿದೆ.ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಶ್ಲಾಘನೀಯ, ತ್ಯಾಗಮಯ ಹಾಗೂ ಆದರ್ಶಪ್ರಾಯವಾದ ಸೇವೆ ಸಲ್ಲಿಸಿದ ನೌಕರರಿಗೆ ಕೂಲಂಕುಶ ಪರಿಶೀಲನೆಯ ನಂತರ ರೂ. 20,000/- ಗಳ ವರೆಗಿನ ನಗದು ಹಾಗೂ ಸ್ವರ್ಣ ಪದಕಗಳನ್ನು ಕೊಟ್ಟು ಪುರಸ್ಕರಿಸಲಾಗುತ್ತದೆ.
 • ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು

  ಉದ್ಯೋಗಿಗಳಿಗಾಗಿ ವಿಭಾಗೀಯ ಹಾಗೂ ಅಂತರ್-ವಿಭಾಗೀಯ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ.
 • ಸಂಚಾರ ಪ್ರೋತ್ಸಾಹಧನ ಯೋಜನೆ

  • ಈ ಯೋಜನೆ ಚಾಲಕರು ಹಾಗೂ ನಿರ್ವಾಹಕರಿಗೆ ಅನ್ವಯಿಸುತ್ತದೆ.
  • ನಗರ ಹಾಗೂ ಉಪ-ನಗರ ಸೇವೆಗಳಲ್ಲಿ ಸಂಚಾರ ಆದಾಯ ಶೇಖರಣೆಯ 3%.
  • ಸಾಮಾನ್ಯ, ಗ್ರಾಮಾಂತರ ಪ್ರದೇಶ, ವೇಗದೂತ, ಅರೆ-ಸುವಿಹಾರಿ ಸೇವೆಗಳಲ್ಲಿ ಸಂಚಾರ ಆದಾಯ ಶೇಖರಣೆಯ 2%.
 • ಸಲಹೆ/ಮಾರ್ಗದರ್ಶನ

  ಕಾರ್ಮಿಕ ವರ್ಗದಲ್ಲಿ ಅತ್ಯಧಿಕ ಉತ್ಪಾದಕತೆಯನ್ನು ಪ್ರೋತ್ಸಾಹಿಸಲು ಕ.ರಾ.ರ.ಸಾ.ನಿ. ದಲ್ಲಿ ನೌಕರಿಗಾಗಿ ಸಲಹೆ/ಮಾರ್ಗದರ್ಶನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗೈರು ಹಾಜರಿಯಲ್ಲಿ ಕಡಿತ, ಉತ್ಪಾದಕತೆಯಲ್ಲಿ ಹೆಚ್ಚಳ, ಅಪಘಾತಗಳ ಸಂಖ್ಯೆಯಲ್ಲಿ ಇಳಿತ, ಪ್ರಯಾಣಿಕರೊಂದಿಗೆ ನೌಕರರ ಉತ್ತಮ ವರ್ತನೆಗಳನ್ನು ಪ್ರೋತ್ಸಾಹಿಸುವಲ್ಲಿ ಈ ಯೋಜನೆ ತುಂಬಾ ಸಹಾಯಕಾರಿಯಾಗಿದೆ.
 • ಸ್ವಯಂ ಘೋಷಿತ ನಿವೃತ್ತಿ ಯೋಜನೆ

  12.08.2005 ರಿಂದ ಸ್ವಯಂ ಘೋಷಿತ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಸ್ವಯಂ ಘೋಷಿತ ನಿವೃತ್ತಿಯನ್ನು ಆಯ್ದುಕೊಳ್ಳುವ ಉದ್ಯೋಗಿ ರೂ.75,000/- ದಿಂದ ರೂ.2,00,000/- ದ ವರೆಗಿನ ಹೆಚ್ಚುವರಿ ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ಸ್ವಯಂ ಘೋಷಿತ ನಿವೃತ್ತಿ ಯೋಜನೆಯಡಿಯಲ್ಲಿ ಪಡೆಯಬಹುದಾದ ಕನಿಷ್ಠ ಮೊತ್ತವನ್ನು ಅಕ್ಟೋಬರ್ 2010 ರಿಂದ ರೂ. 1,25,000/- ಕ್ಕೆ ಹೆಚ್ಚಿಸಲಾಗಿದೆ.

ಇತ್ತೀಚಿನ ನವೀಕರಣ​ : 17-12-2020 06:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ