ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಪ್ರಯಾಣಿಕರ ಸುರಕ್ಷತೆ

ಪ್ರಯಾಣಿಕರ ಸುರಕ್ಷತೆಗಾಗಿ ಅಳವಡಿಸಿರುವ ಭದ್ರತಾ ಕ್ರಮಗಳು

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೆಳಕಂಡ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ:

 • ಬಸ್ ನಿಲ್ದಾಣದ ಪ್ರವೇಶವನ್ನು 5 ಪ್ರವೇಶ ದ್ವಾರಗಳಿಗಷ್ಟೇ ನಿರ್ಬಂಧಿಸಲಾಗಿದೆ.
 • ಪ್ರಯಾಣಿಕರು ಹಾಗೂ ಅವರ ಸಾಮಾನುಗಳನ್ನು ತಪಾಸಣೆ ಮಾಡಲು ಈ ಐದೂ ಪ್ರವೇಶ ದ್ವಾರಗಳಲ್ಲಿ ’ಬಾಗಿಲ ಚೌಕಟ್ಟು ಲೋಹ ಶೋಧಕ’ ಯಂತ್ರಗಳನ್ನು ಅಳವಡಿಸಲಾಗಿದೆ.
 • ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಚಟುವಟಿಕೆಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಐ.ಪಿ. ಕ್ಯಾಮೆರಾಗಳ ಮೂಲಕ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಸೆರೆ ಹಿಡಿಯಲಾಗುತ್ತದೆ ಹಾಗೂ ನಿರಂತರವಾಗಿ ಪರೀವೀಕ್ಷಿಸಲಾಗುತ್ತದೆ.
 • ಬಸ್ ನಿಲ್ದಾಣದ ಕಾರ್ಯನಿರ್ವಹಣೆ ಹಾಗೂ ಭದ್ರತಾ ಸಂಭಂದಿತ ವಿಷಯಗಳನ್ನು ಪರಿವೀಕ್ಷಿಸಲು ಅತ್ಯಾಧುನಿಕ ನಿಯಂತ್ರಣ ಕೊಠಡಿಯನ್ನು 24 ಗಂಟೆಗಳ ಕಾಲ ನಿರ್ವಹಣೆ ಮಾಡಲಾಗುತ್ತಿದೆ.
 • ಭದ್ರತಾ ಕಾವಲುಗಾರರ ಸಂಖ್ಯೆಯನ್ನು 43 ರಿಂದ 58 ಕ್ಕೆ ಏರಿಸಲಾಗಿದೆ.
 • ವಾರಾಂತ್ಯದ ದಿನಗಳಲ್ಲಿ ಹಾಗೂ ರಜಾ ದಿನಗಳಲ್ಲಿ ನೆರೆಯ ವಿಭಾಗಗಳಿಂದ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
 • ಕೆ.ಎಸ್.ಆರ್.ಪಿ.ಯ ದಳವೊಂದು ನಿರಂತರವಾಗಿ 24 ಗಂಟೆಗಳ ಕಾಲ ಲಭ್ಯವಿರುತ್ತದೆ.
 • ಬಸ್ ನಿಲ್ದಾಣದಲ್ಲಿ ಹಾಲಿ ಇರುವ ಪೋಲೀಸ್ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೋಲೀಸ್ ಠಾಣೆಯನ್ನಾಗಿ ಪರಿವರ್ತಿಸುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಡಲಾಗಿದೆ.
 • ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಸಾಮಾನು ಕೊಠಡಿಯಲ್ಲಿರುವ ವಾರಸುದಾರರಿಲ್ಲದ ಸಾಮಾನುಗಳ ಹಾಗೂ ದ್ವಿಚಕ್ರ ವಾಹನ ನಿಲುಗಡೆಗಳಲ್ಲಿ ದೀರ್ಘಾವಧಿಯಿಂದ ನಿಂತಿರುವ ವಾಹನಗಳ ವಿಲೇವಾರಿಗಾಗಿ ಪೋಲೀಸ್ ಅಧಿಕಾರಿಗಳ ಜೊತೆಗೂಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
 • ಕೆಂಪೇಗೌಡ ಬಸ್ ನಿಲ್ದಾಣ & ಎಮ್.ಸಿ.ಟಿ.ಸಿ. ಬಸ್ ನಿಲ್ದಾಣಗಳಿಂದ ಬಸ್ ಕಾರ್ಯಾಚರಣೆಗಳ ಮೇಲೆ ನಿಗಾ ವಹಿಸಲು ವೈರ್‌ಲೆಸ್ ಜಾಲವನ್ನು ಅಳವಡಿಸಿ ಕೇಂದ್ರ ಕಚೇರಿಯಿಂದ ನಿಯಂತ್ರಿಸಲಾಗುತ್ತಿದೆ.

ಇತರೆ ಬಸ್ ನಿಲ್ದಾಣಗಳಲ್ಲಿ:

 • ಪ್ರಯಾಣಿಕರ ಸಾಮಾನುಗಳನ್ನು ಪರಿಶೀಲಿಸಲು ಹಸ್ತಚಾಲಿತ ಲೋಹ ಶೋಧಕಗಳನ್ನು ಒದಗಿಸಲಾಗಿದೆ.
 • ಸಿ.ಸಿ.ಟಿ.ವಿ. ಕಣ್ಗಾವಲು ವ್ಯವಸ್ಥೆಯನ್ನು ಈಗಾಗಲೇ ಮಂಗಳೂರು, ತುಮಕೂರು, ಮೈಸೂರು ನಗರ ಹಾಗೂ ಮಂಡ್ಯ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಇತರ ಪ್ರಮುಖ ಬಸ್ ನಿಲ್ದಾಣಗಳಲ್ಲೂ ಈ ವ್ಯವಸ್ಥೆಯನ್ನು ಹಂತ-ಹಂತವಾಗಿ ಅಳವಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
 • ಈ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯ ನಿರ್ವಹಣೆಯನ್ನು ಮಾಜಿ ಸೈನಿಕರು, ಗೃಹ ರಕ್ಷಕರು ಹಾಗೂ ಖಾಸಗಿ ನಾಗರಿಕ ರಕ್ಷಕರುಗಳನ್ನು ಬಳಸಿಕೊಂಡು ನೋಡಿಕೊಳ್ಳಲಾಗುತ್ತಿದೆ.
 • ಮೈಸೂರು ನಗರ ಹಾಗೂ ಸುತ್ತ-ಮುತ್ತಲಿನ 12 ಘಟಕಗಳ ಉತ್ತಮ ಬಸ್ ಕಾರ್ಯಾಚರಣೆಯ ಸಂಪರ್ಕಕ್ಕಾಗಿ ವೈರ್‌ಲೆಸ್ ಜಾಲವನ್ನು ಅಳವಡಿಸಿಕೊಳ್ಳಲಾಗಿದೆ.

ಕ.ರಾ.ರ.ಸಾ.ನಿ. ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಮಂಡಳಿ 2008-09

 • ಕ.ರಾ.ರ.ಸಾ.ನಿ.ದ ಬಸ್ ಪ್ರಯಾಣ ಮಾಡುವಾಗ ರಸ್ತೆ ಅಪಘಾತಗಳಲ್ಲಿ ಮೃತ ಪಟ್ಟ ಪ್ರಯಾಣಿಕರ ಕಾನೂನು ಬದ್ಧ ವಾರಸುದಾರರಿಗೆ ತ್ವರಿತ ಆರ್ಥಿಕ ಪರಿಹಾರ ಒದಗಿಸಲು ಕ.ರಾ.ರ.ಸಾ.ನಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಮಂಡಳಿ 01-06-2002 ರಿಂದ ಕಾರ್ಯ ನಿರ್ವಹಿಸುತ್ತಿದೆ.
 • ನಿಗಮದ ಅಪಘಾತ ಪರಿಹಾರ ನಿಧಿ ಮಂಡಳಿಯಿಂದ ದೊರಕುವ ಪರಿಹಾರವು, ಎಮ್.ಎ.ಸಿ.ಟಿ. ನ್ಯಾಯಾಲಯಗಳಿಂದ ಸಿಗುವ ಪರಿಹಾರದ ಜೊತೆಗೆ ನೀಡುವಂತಹುದಾಗಿರುತ್ತದೆ.
 • ಪರಿಹಾರ ನಿಧಿಯಿಂದ ಮೃತ ವ್ಯಕ್ತಿಯ ಅವಲಂಬಿತರಿಗೆ ನೀಡುವ ಮೊತ್ತವನ್ನು 01-09-2008 ರಿಂದ ರೂ. 2.50 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
 • ಅ.ಪ.ನಿ. ಶುಲ್ಕವಾಗಿ ಕ.ರಾ.ರ.ಸಾ.ನಿ. ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ರೂ.1 ಶುಲ್ಕವನ್ನು 01-09-2008 ರಿಂದ ರದ್ದುಗೊಳಿಸಲಾಗಿದೆ.

ಇತ್ತೀಚಿನ ನವೀಕರಣ​ : 24-01-2021 04:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ